ವಯಸ್ಸಾದ ಮಹಿಳೆಯರಿಗೆ ಅಕ್ಷಯ ಪಾತ್ರೆ ಪ್ರತಿಷ್ಠಾನವು ಪೌಷ್ಟಿಕ ಆಹಾರವನ್ನು ನೀಡುತ್ತಿದೆ.
ಒಬ್ಬಂಟಿಯಾಗಿ ಜೀವಿಸುವ ಮಹಿಳೆಯರು ಆರೋಗ್ಯದಿಂದಿರಲು ಪೌಷ್ಟಿಕ ಆಹಾರ ಅತ್ಯಗತ್ಯ, ಆದ್ದರಿಂದ ಇಳಿ ವಯಸ್ಸಿನಲ್ಲಿ ಗೌರವ ಹಾಗೂ ಘನತೆಯಿಂದ ಬದುಕಲು ಅವರಿಗೆ ಅಕ್ಷಯ ಪಾತ್ರೆ ಪ್ರತಿಷ್ಠಾನವು ಪೌಷ್ಟಿಕ ಆಹಾರವನ್ನು ನೀಡುವ ಯೋಜನೆಯನ್ನು ಹಮ್ಮಿಕೊಂಡಿದೆ.
ಮಹಿಳೆಯರಿಗೆ ಸ್ವಾದಿಷ್ಟ ಹಾಗೂ ಆರೋಗ್ಯಪೂರ್ಣ ಊಟ ನೀಡುವ ಯೋಜನೆ
ಭಾರತದಲ್ಲಿ ಶೇಕಡಾ 10 % ರಷ್ಟು ಮಹಿಳೆಯರು ತಮ್ಮ ಮನೆಯ ಆಧಾರಸ್ತಂಭವಾಗಿದ್ದ ಪತಿಯನ್ನು ಕಳೆದುಕೊಂಡು ಜೀವನ ಸಾಗಿಸುತ್ತಿದ್ದಾರೆ.
ಇದರಲ್ಲಿ ಬಹುತೇಕ ಮಹಿಳೆಯರು ಒಬ್ಬಂಟಿಯಾಗಿದ್ದಾರೆ. ಸಕ್ರಿಯವಾಗಿರುವ ಒಬ್ಬ ಮಹಿಳೆ ಆರೋಗ್ಯವಾಗಿರಲು ದಿನಕ್ಕೆ 1200-1800 ರಷ್ಟು ಕ್ಯಾಲೋರಿ ಇರುವ ಆಹಾರ ಸ್ವೀಕರಿಸಬೇಕು.
ಪೌಷ್ಟಿಕ ಹಾಗೂ ತಾಜಾ ಆಹಾರವನ್ನು ಸ್ವೀಕರಿಸುವುದರಿಂದ ಅವರು ಆರೋಗ್ಯವಾಗಿರಬಹುದು. ಸ್ವಾಭಿಮಾನಿ ಹಾಗೂ ಸ್ವಾವಲಂಬಿಗಳಾಗಿ ಬದುಕಲು ಮಹಿಳೆಯರು ಆರೋಗ್ಯವಾಗಿರಬೇಕು.
ನೀವು ಸಹ ಈ ಯೋಜನೆಯನ್ನು ದೇಣಿಗೆ ನೀಡುವ ಮೂಲಕ ನಿಮ್ಮ ಬೆಂಬಲ, ಪ್ರೋತ್ಸಾಹವನ್ನು ನೀಡಬಹುದು
ಒಬ್ಬ ಮಹಿಳೆಯ ಒಂದು ಹೊತ್ತಿನ ಊಟದ ಖರ್ಚು 25 /- ರೂ ಆಗಿದೆ. ಈ ಸದುದ್ದೇಶವನ್ನು ಬೆಂಬಲಿಸಲು ನೀವು ದೇಣಿಗೆ ನೀಡಬಹುದು. ನೀವು ಮಾಡುವ ಹಣ ಸಹಾಯದಿಂದ ಒಬ್ಬ ವಯಸ್ಸಾದ ಮಹಿಳೆ, ಗರ್ಭಿಣಿ, ಪತಿಯನ್ನು ಕಳೆದುಕೊಂಡಿರುವ ಮಹಿಳೆಯರು ಪೌಷ್ಟಿಕ ಆಹಾರವನ್ನು ಸ್ವೀಕರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಈ ಯೋಜನೆಯನ್ನು ಇನ್ನಷ್ಟು ಅರ್ಹ ಫಲಾನುಭವಿ ಮಹಿಳೆಯರಿಗೆ ತಲುಪಲು ನಿಮ್ಮ ಬೆಂಬಲ, ಪ್ರೋತ್ಸಾಹ ಅತ್ಯಗತ್ಯ. ಇಂದೇ ಈ ಯೋಜನೆಗೆ ನಿಮ್ಮ ಬೆಂಬಲ ನೀಡಿ. ನೀವು ನೀಡುವ ದೇಣಿಗೆಗೆ ತೆರಿಗೆ ವಿನಾಯಿತಿ ಕೂಡ ಪಡೆಯಬಹುದು.
ಈ ಸತ್ಕಾರ್ಯವನ್ನು ಇಂದೇ ಬೆಂಬಲಿಸಿ.